Friday, 5 September 2014

 
ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟಡ ಕ್ರೀಡಾಕೂಟ.2014.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ ತಾ ಧಾರವಾಡ ಇಲ್ಲಿ ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟದ ಕ್ರೀಡಾ ಕೂಟವನ್ನು ಟಾ ಟಾ ಮೋಟರ್ಸ್ ಇವರ ಸಹಯೋಗದೊಂದಿಗೆ ದಿನಾಂಕ 6-8- 2014 ರಂದು ಸಂಘಟಿಸಲಾಯಿತು. ಈ ಕ್ರೀಡಾಕೂಟವನ್ನು ಟಾ ಟಾ ಮೋಟರ್ಸ್ ಅಧಿಕಾರಿಗಳಾದ ಶ್ರೀ ಚನ್ನಬಸವಣ್ಣ ಅಲೆಗೌಡರ ಇವರು ಉದ್ಘಾಟಿಸಿದರು. ಇವರು ಮಾತನಾಡುತ್ತ ಅಭ್ಯಾಸದ ಜೋತೆಗೆ ಆಟಗಳು ಮಹತ್ವವನ್ನು ಪಡೆದಿವೆ. ಇನ್ನು ಹೆಚ್ಚಿಗೆ ಆಟಗಳಿಗೆ ಮಹತ್ವನ್ನು ನೀಡಿ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ಶ್ರೀಮತಿ ಪ್ರೇಮಾ ಕೋಮಾರ ದೇಸಾಯಿ ಇವರು ಮಾತನಾಡುತ್ತ ಮಕ್ಕಳ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಮುಖ್ಯ ಗೆಲುವಿಗಿಂತ ಆಟಗಳಲ್ಲಿ ಭಾಗವಹಿಸುವುದು ಮುಖ್ಯ, ಆಟಗಳಲ್ಲಿ ಬಾಗವಹಿಸಿ ಉತ್ತಮ ಕ್ರೀಡಾ ಪಟುಗಳಾಗಿ ಬೆಳೆಯಿರಿ ಎಂದು ಮಕ್ಕಳಿಗೆ ಕರೆ ನೀಡಿದರು.
ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಸಪ್ಪಪೂಜಾರ ಎಸ್ ಡಿ ಎಮ ಸಿ ಅಧ್ಯಕ್ಷರು ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಚಿಕ್ಕಣ್ಣವರ ಅತಿಥಿಗಳಾಗಿ ಬಾಗವಹಿಸಿದ್ದರು. ಶ್ರೀ ಮಡಿವಾಳಪ್ಪ ನೇಕಾರ, ಶ್ರಿಮತಿ ಬಡಿಗೇರ ,ಶ್ರೀ ಜಲದೇವ ಹೆಗ್ಗೇರಿ,ಶ್ರೀ ಕಲ್ಲಪ್ಪ ಸಂದೂರಿ, ಗ್ರಾಮ ಪಂಚಾಯಿತ ಸದಸ್ಯರು. ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ರಾಜು ಮಲ್ಲಗವಾಡ, ದ್ಯಾಮವ್ವ ಹುಲ್ಲಂಬಿ, ಶ್ರೀ ರುದ್ರಪ್ಪ ಹೆಗ್ಗೇರಿ. ಕಲ್ಲಪ್ಪ ಮಾದಾರಿ ಟಾ ಟಾ ಮೋಟರ್ಸನ ಶ್ರೀ ಜಿ ವಿ ಹಿರೇಮಠ, ಶ್ರೀ ದೇಸಾಯಿ ಭಾಗವಹಿಸಿದ್ದರು.
ಸಾಯಂಕಾಲ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣಾ ಸಮಾರಂಬದಲ್ಲಿ ತಾಲೂಕಾ ಪಂಚಾಯತಿ ಸದಸ್ಯರಾದ ಶ್ರೀ ಧಶರತರಾವ ಕೆ ದೇಸಾಯಿ ಇವರು ಬಾಗವಹಿಸಿ ಮಾತನಾಡಿ ಆಟಗಳು ಮಕ್ಕಳಲ್ಲಿ ಹೊಸ ಹರುಪು ನೀಡುತ್ತವೆ ಪಾಠ ಗಳು ಬೌಧ್ಧಿಕ ಬೆಳವಣಿಗೆಗೆ ಸಹಕಾರಿಯಾದರೆ, ಆಟಗಳು ದೈಹಿಕ ಬೆಳವಣಿಗೆಗೆ ಸಹಕಾರಿ ಎಂದರು ಟಾ ಟಾ ಮೋಟರ್ಸನ ಶ್ರೀ ಜಿ ವಿ ಹಿರೇಮಠ, ಶ್ರೀ ದೇಸಾಯಿ ಭಾಗವಹಿಸಿ ತಮ್ಮ ಕಂಪನಿಯಿಂದ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು.ಅಧ್ಯಕ್ಷತೆಯನ್ನು ಶ್ರೀ ಬಸಪ್ಪಪೂಜಾರ ಎಸ್ ಡಿ ಎಮ ಸಿ ಅಧ್ಯಕ್ಷರು ವಹಿಸಿದ್ದರು. ಬಿ ಆರ್ ಪಿ ಶ್ರೀಮತಿ ಶಶಿಕಲಾ ಕುರಿ, ಸಿ ಆರ್ ಪಿ ಶ್ರೀ ಎಂ ವಿ ಛಬ್ಬಿ, ಪ್ರಧಾನ ಗುರುಗಳು ಶ್ರೀಮತಿ ನ ಜೆ ಕೊಂಗನೋಳ್ಳಿ, ಗ್ರಾಮದ ಯುವಕ ಮಂಡಳದ ಯುವಕರು ಗ್ರಾಮಸ್ಥರು ಭಾಗವಹಿಸಿದ್ದರು,
ಟಾ ಟಾ ಮಾರ್ಕೋಪೋಲೆ ಕಂಪನಿ ಸಹಕಾರದೊಂದಿಗೆ ಸಿಬ್ಬಂದಿಗಳಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು ಎಲ್ಲರ ಸಹಕಾರದೊಂದಿಗೆ ಈ ದಿನ ಕ್ರೀಡಾ ಹಬ್ಬವಾಗಿ ಸಂಬ್ರಮ ದಿಂದ ನಡೆಯಿತು.

2014-15 ನೇ ಸಾಲಿನ ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟದ  ಕ್ರೀಡಾ ಟಾಟಾ ಮೋಟರ್ಸ ಸಹಯೋಗದೊಂದಿಗೆ ದಿ ನಾಂಕ 6-8-2014 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ ಇಲ್ಲಿ ನಡೆಯಿತು.



ಉದ್ಘಾಟಕರಾದ ಟಾ ಟಾ ಮೋಟರ್ಸನ ಅಧಿಕಾರಿಗಳಾದ ಶ್ರೀ ಬಸವಣ್ಣಗೌಡ ಆಲೆಗೌಡರ ಮಾತನಾಡುತ್ತಿರುವದು.
ಜಿಲ್ಲಾ ಪಂಚಾಯತಿಯ ಸದಸ್ಯರಾದ ಶ್ರೀಮತಿ ಪ್ರೇಮಾ ಕೋಮಾರದೇಸಾಯಿ ಮುಖ್ಯ ಅಥಿತಿಗಳಾಗಿ ಭಾಗವಸಿದ್ದರು



Wednesday, 13 August 2014

ಮೊದಲ ಮಾತು

ಮೊದಲ ಮಾತು :

ಶಾಲೆ ಎಂದರೆ ಮಕ್ಕಳ ಚಿಲಿ ಪಿಲಿ ಹಕ್ಕಿಗಳ ಗೂಡು, ವಿಧ್ಯಾಮಂದಿರ, ಶಾಲೆ ಗುಡಿ ಹಿಂದಿನಿಂದಲೂ ನಮ್ಮ ಊರಿನ ಜನ ಶಾಲೆಯನ್ನು ಶಾಲೆಯ ಗುಡಿ ಎಂದೇ ಕರೆಯುವದು  ರೂಢಿ. ಇಂದು ಶಾಲೆಯು ಜಗತ್ತಿನೊಂದಿಗೆ ವೇಗವಾಗಿ ಬೆಳವಣಿಗೆ ಯಾಗುತ್ತಿವೆ. ಹಲವಾರು ಸೌಲಭ್ಯಗಳನ್ನು ಪಡೆದುಕೊಂಡಿವೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಇಂದು ಅಂಗೈಯಲ್ಲಿ ಬಂದು ನಿಂತಿದೆ ಇದರ ಸದುಪಯೋಗವನ್ನು ನಮ್ಮ ಶಾಲೆ ಪಡೆದುಕೊಳ್ಳು ಒಂದು ಚಿಕ್ಕ ಪ್ರಯತ್ನವನ್ನು ನಾವು ಮಾಡಿದ್ದೇವೆ.
      ಅದೆಂದರೆ ನಮ್ಮ ಸರಕಾರಿ ಶಾಲೆಯ ಸ್ವಂತ ತನ್ನದೆಯಾದ ಬ್ಲಾಗಸ್ಪಾಟನ್ನು ಅಗಷ್ಟ 13 2014 ರಂದು ಪ್ರಾರಂಭಿಸಿ ದಿನಾಂಕ 15-8-2014 ರಂದು ವಿಧ್ಯುಕ್ತವಾಗಿ ಚಾಲನೆಯನ್ನು ನೀಡಲಾಯಿತು. ಇದರ ಉದ್ದೇಶ ನಮ್ಮ ಸರಕಾರಿ ಶಾಲೆಯಲ್ಲಿನ ಸರಕಾರದಿಂದ ದೊರೆಯುವ ಸೌಲಬ್ಯಗಳನ್ನು ಸಮುದಾಯಕ್ಕೆ ತಿಳಿಸುವದಾಗಿದೆ. ಮತ್ತು ಶಾಲೆಯಲ್ಲಿ ನಡೆಯುವ ಶೈಕ್ಷಣಿಕ, ಪಠ್ಯ, ಸಹ ಪಠ್ಯ, ಪಠ್ಯೇತರ ಚಟುವಟಿಕೆಗಳನ್ನು ಸಮುದಾಯಕ್ಕೆ ತಲುಪಿಸುವದು. ನಮ್ಮ ಗ್ರಾಮದ ಅನೇಕರು ವಿವಿಧ ಕ್ಷೆತ್ರ ವಿವಿಧ ಊರುಗಳ್ಲಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಮೂಡಿಸುವದಾಗಿದೆ. ಮತ್ತು ಶಾಲೆಯ ಅಭಿವೃದ್ದಿಗೆ ಸಲಹೆ ಸೂಚನೆ ಮತ್ತು ಸಹಕಾರವನ್ನು ಪಡೆಯುವ ಉದ್ದೇಶವನ್ನು ಹೊಂದಲಾಗಿದೆ.
        ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ನಮ್ಮ ಅಭಿವೃದ್ದಿಗೆ ತಮ್ಮ ಸಲಹೆ ಸಹಕಾರ ಮಾರ್ಗದರ್ಶನದ ನಿರೀಕ್ಷೆಯಲ್ಲಿರುವ. 
  
                                                                                             ಪ್ರಧಾನಗುರುಗಳು,
                                                                              ಶಿಕ್ಷಕ ಸಿಬ್ಬಂದಿ, ಎಸ್ ಡಿ ಎಮ ಸಿ ಸಮಿತಿ
                                                                                        ಬೇಲೂರ ತಾ: ಧಾರವಾಡ.
 ವಿಳಾಸ : ghpsbelur.38@gmail.com
     
             https:// hpsbelur.blogspot.com


ನಮ್ಮೂರ ಶಾಲೆ :

            ನಮ್ಮೂರ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ. 1928 ರಲ್ಲಿ ಪ್ರಾರಂಭವಾಯಿತು. ಸ್ವಾತಂತ್ರ ಪೂರ್ವದಲ್ಲಿ ಪ್ರಾರಂಭವಾದ ಶಾಲೆ ಇಂದು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.

        ಅರೆ ಮಲೆನಾಡು ಪ್ರದೇಶದ ಸಾಂಸ್ಕ್ರಯತಿಕ ನಗರಿ ಫೇಡಾ ನಗರಿ ಧಾರವಾಡ. ತಾಲೂಕಿನ ಬೇಲೂರು ಗ್ರಾಮವು ಹಸಿರು ಪ್ರಕೃಯ ಸಂತ್ತಿನಿಂದ ಕೂಡಿದ ಮತ್ತು ಕರ್ನಾಟಕ ಉಚ್ಚನ್ಯಾಯಾಲಯ, ರಾಜ್ಯ ನೀರಾವರಿ ನಿಗಮದ ಕೇಂದ್ರ ಕಛೇರಿ , ಬೃಹತ್ತ ಮತ್ತು ಮಧ್ಯಮ ಕೈಗಾರಿಕೆಗಳನ್ನು ಒಳಗೊಂಡ ಕೈಗಾರಿಕಾ ವಸಹಾತು ಗಳಿಂದ ಕೂಡಿದ  ಗ್ರಾಮವಾಗಿದೆ. ಈ ಊರಿನ್ಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು ಈ ಶಾಲೆಯು 1928 ರಲ್ಲಿ ಸ್ವಾತಂತ್ರ ಪೂರ್ವದಲ್ಲಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಪ್ರಾರಂಭವಾದಗಿ ಸ್ವಾತಂತ್ರ ಪೂರ್ವದ ದಿನದಿಂದಲೂ ವಿಧ್ಯಾ ದಾನ ಮಾಡುತ್ತಿದೆ. ಈ ಶಾಲೆಯು ಹಲವಾರು ದಾನಿಗಳ ಪರಿಶ್ರಮದಿಂದ ಸ್ಕೂಲ್ ಬೋರ್ಡ ಕಮೀಟಿಯಿಂದ 1928 ರಲ್ಲಿ ಸ್ಥಾಪನೆಗೊಂಡಿತು. ಇಲ್ಲಿ  ಜ್ಞಾನಾಜ‍್ನೆ ಪಡೆದ ಹಲವಾರು ವಿಧ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಪ್ರಸತ್ತುತ ಸಾಲಿನಲ್ಲಿ 1 ರಿಂದ8 ನೇಯ ತರಗತಿವರೆಗೆ 350 ವಿಧ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಒಟ್ಟು 9 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮವಾದ ಎಸ್ ಡಿ ಎಂ ಸಿ, ಹಾಗೂ ಗ್ರಾಮ ಪಂಚಾಯತಿ ಯವರ ಸಹಕಾರಿದಿಂದ  ಶಾಲೆಯು ಸರ್ವತೋಮುಖ ಬೆಳವಣಿಗೆಯತ್ತ ಮುನ್ನಡೆಯುತ್ತಿದೆ.

 
ನಮ್ಮ ಶಾಲೆಯಲ್ಲಿ ಸಿಗುವ ಸರಕಾರಿ ಸೌಲಭ್ಯಗಳು :
1.ಉಚಿತ ಶಿಕ್ಷಣ : 6 ರಿಂದ 14 ವರ್ಷದ ಮಕ್ಕಳಿಗೆ ಎಲ್ಲ ಮಕ್ಕಳಗೂ ಗುಣಾತ್ಮಕ ಶಿಕ್ಷಣ ನೀಡಲಾಗುವದು. ಕಲಿಕೆಯಲ್ಲಿ ಹಿಂದುಳದ ಮಕ್ಕಳಿಗೆ ವಿಷೇಶ ಪರಿಹಾರ ಬೋಧನೆ ನಡೆಸಲಾಗುತ್ತಿದೆ.
2. ಉಚಿತ ಪಠ್ಯಪುಸ್ತಕ : ಶಾಲೆಗೆ ದಾಖಲಾದ ಎಲ್ಲ ಮಕ್ಕಳಿಗೂ ಉಚಿತ ಪಠ್ಯ ಪುಸ್ತಕ ನಿಡಲಾಗುತ್ತಿದೆ ಆಯ್ದ 5 ರಿಂದ 8 ನೇ ತರಗತಿವರೆಗೆ ಅಭ್ಯಾಸಪುಸ್ತಕ (ವರ್ಕ ಬುಕ್ಕ) ನೀಡಲಾಗುತ್ತಿದೆ.
3. ಉಚಿತ ಸಮವಸ್ತ್ರ : ದಾಖಲಾದ ಎಲ್ಲ ಮಕ್ಕಳಿಗೂ ಎರಡು ಜತೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ. ಪಠ್ಯಪುಸ್ತಕ, ಸಮವಸ್ತ್ರ ಶಾಲೆ ಪ್ರಾರಂಭದ ಮೊದಲ ದಿನವೆ ನಿಡಲಾಗುತ್ತಿದೆ.
4.ಅಕ್ಷರ ದಾಸೋಹ : ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿಯಲ್ಲಿ ಪ್ರತಿ ನಿತ್ಯ ಬಿಸಿಯೂಟವನ್ನು ನೀಡಲಾಗುತ್ತಿದೆ.
5. ಕ್ಷೀರ ಭಾಗ್ಯ : ವಾರದಲ್ಲಿ 3 ದಿನ ಪ್ರತಿಯೊಂದು ಮಗುವಿಗೂ ಹಾಲು ವಿತರಿಸಲಾಗುತ್ತಿದೆ.
6.ಆರೋಗ್ಯ ಚೈತನ್ಯ ಕಾರ್ಯಕ್ರಮ : ಶಾಲೆಗೆ ದಾಖಲಾದ ಎಲ್ಲ ಮಕ್ಕಳಿಗೆ ಆರೋಗ್ಯಕಾರ್ಡ ಹೊಂದಿದ್ದು, ಆರೋಗ್ಯ ತಪಾಸನೆ ಮಾಡಿ ಅವಶ್ಯವಿದ್ದಲ್ಲಿ ಹೆಚ್ಚಿನ ಚಿಕತ್ಸೆಯನ್ನು ಉಚಿತವಾಗಿ ಕೊಡಿಸಲಾಗುತ್ತಿದೆ.
7. ಗುಳಿಗೆ ವಿತರಣೆ: ಮಕ್ಕಳ ಸದೃಢ ದೇಹ ಬೆಳವಣಿಗೆಗೆ ಸಹಾಯಕವಾಗಿ ಕಬ್ಬಿನಾಂಶದ ಮಾತ್ರೆ, ಜಂತುನಾಶಕ, ವಿಟಮಿನ್ನ ಮಾತ್ರಗಳನ್ನು ನಿಯಮಾನುಸಾರ ಉಚಿತವಾಗಿ ನೀಡಲಾಗುತ್ತಿದೆ.
8. ಗೃಹ ಆಧಾರಿತ ಶಿಕ್ಷಣ : ವಿಷೇಶ ಅಗತ್ಯ ಉಳ್ಳ 6 ರಿಂದ 14 ವರ್ಷದ ಮಕ್ಕಳಿಗೆ ಶಾಲೆಗೆ ಬಾರದ ಮಕ್ಕಳಿಗೆ ಗೃಹ ಆಧಾರಿತ ಶಿಕ್ಷಣ ನೀಡಲು ಸ್ವಯಂ ಸೇವಕರನ್ನು ನೇಮಿಸಿ ವಿಷೇಶ ಅಗತ್ಯ ಉಳ್ಳ ಆರೋಗ್ಯ, ಶಿಕ್ಷಣದಬಗ್ಗೆ ಕಾಳಜಿ ವಹಿಸುತ್ತಿದೆ.
9. ಉಚಿತ ಬೈಸಿಕಲ್ಲ ವಿತರಣೆ : 8 ನೇ ತರಗತಿಯಲ್ಲಿ ಓಡುತ್ತಿರುವ ಎಲ್ಲ ಮಕ್ಕಳಿಗೂ ಉಚಿತ ಬೈಸಿಕಲ್ಲನ್ನು ನೀಡಲಾಗುತ್ತಿದೆ. (ಬಸ್ಸ ಪಾಸ್ ಹೊಂದಿದ ಮಕ್ಕಳನ್ನು ಹೊರತು ಪಡಿಸಿ)
ನಮ್ಮ ಗುರಿಗಳು :
  1. ದಾಖಲಾತಿ : ಗ್ರಾಮದ ಜನವಸತಿ ಪ್ರದೇಶದಲ್ಲಿನ 6 ರಿಂದ 14 ವರ್ಷದ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವದು.
  2. ಹಾಜರಾತಿ : ದಾಖಲಾದ ಎಲ್ಲ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಮಾಡುವದು.
  3. ಓದು,ಬರಹ,ಲೆಕ್ಕ: ಎಲ್ಲ ಮಕ್ಕಳು ಕನಿಷ್ಠ ಕಲಿಕಾ ಮಟ್ಟ ಸರಳ ಓದು, ಶುದ್ದ ಬರಹ, ಗಣಿತ ಮೂಲ ಕ್ರೀಯೇಗಳನ್ನು ದೋಷವಿಲ್ಲದಂತೆ ಮಾಡುವದು.
  4. ಭಾಗ ವಹಿಸಿವಿಕೆ : ಪ್ರತಿಯೋದು ಮಗು ಶಾಲೆಯಲ್ಲಿ ನಡೆಯುವ ಶೈಕ್ಷಣಿಕ, ಸಾಂಸ್ಕೃತಿಕ, ಸಹ ಪಠ್ಯ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುವದು.